Sunday, March 15, 2026
Home Blog Page 104

‘ಶನೈಶ್ಚರ ಮಹಾತ್ಮೆ’ ಪೂಜಾ ಸಹಿತ ತುಳು ತಾಳಮದ್ದಳೆ

ಮಂಗಳೂರು: ದೇರಳಕಟ್ಟೆ ಶ್ರೀ ವೈದ್ಯನಾಥೇಶ್ವರ ಭಜನಾಮಂದಿರದ 15ನೇ ವಾರ್ಷಿಕ ಮಹೋತ್ಸವ ಸಲುವಾಗಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಬಗಂಬಿಲ ವೈದ್ಯನಾಥ ನಗರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಪೂಜಾ ಸಹಿತ ‘ಶ್ರೀ ಶನೈಶ್ಚರ ಮಹಾತ್ಮೆ  (ವಿಕ್ರಮಾದಿತ್ಯ ವಿಜಯ)’ ತುಳು ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು.

         ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ವಿಕ್ರಮಾದಿತ್ಯ), ಅಶೋಕ ಶೆಟ್ಟಿ ಸರಪಾಡಿ (ಚಂದ್ರಶಯನ), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ಅಲೋಲಿಕೆ),  ಪುತ್ತೂರು ದೇವರಾಜ ಹೆಗ್ಡೆ (ಶನೈಶ್ಚರ), ರವಿ ಅಲೆವೂರಾಯ ವರ್ಕಾಡಿ (ಸುಶೀಲೆ – ಪದ್ಮಾವತಿ), ಡಾ.ದಿನಕರ ಎಸ್. ಪಚ್ಚನಾಡಿ (ಆಸ್ಥಾನ ಪಂಡಿತ) ಮತ್ತು ಸುರೇಶ್ ಕೊಲೆಕಾಡಿ (ನಂದಿ ಶ್ರೇಷ್ಠಿ – ರಾಮಣ್ಣ ಗಾಣಿಗ) ಅರ್ಥಧಾರಿಗಳಾಗಿ ಭಾಗವಹಿಸಿದ್ದರು.

ಹಿಮ್ಮೇಳದಲ್ಲಿ ಹರೀಶ್ ಶೆಟ್ಟಿ ಸೂಡ (ಭಾಗವತರು), ಕೌಶಲ್ ರಾವ್ ಪುತ್ತಿಗೆ (ಮೃದಂಗ), ಸ್ಕಂದ ಕೊನ್ನಾರ್ (ಚಂಡೆ) ಮತ್ತು ಶರಣ್ ಶೆಟ್ಟಿ (ಚಕ್ರತಾಳ) ಸಹಕರಿಸಿದರು.

         ಶ್ರೀ ವೈದ್ಯನಾಥ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಂಚನ್ ವೈದ್ಯನಾಥನಗರ ಸ್ವಾಗತಿಸಿದರು. ಅರ್ಚಕರಾದ ವೆಂಕಟರಮಣ ಭಟ್ ಮತ್ತು ತಂಡದವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಪ್ರಮುಖರಾದ ಪುರುಷೋತ್ತಮ ಪೂಜಾರಿ, ಮೋನಪ್ಪ ಗಟ್ಟಿ, ಬಾಲಕೃಷ್ಣ ಶೆಟ್ಟಿ, ಪುಷ್ಪಲತಾ ಬಾಲಕೃಷ್ಣ ಶೆಟ್ಟಿ , ಶ್ವೇತಾ ವಿ., ಸುರೇಶ್ ಆಚಾರ್ಯ, ಶೇಖರ ಸಾಲ್ಯಾನ್, ಶ್ರವಣ್ ಕುಮಾರ್, ಕೃಷ್ಣ ನಾಯ್ಕ್, ಶಾಲಿನಿ ನಾಗರಾಜ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಆಟ ಎಲ್ಲೆಲ್ಲಿ? (18.01.2023, ಬುಧವಾರ)

ಮೇಳಗಳ ಇಂದಿನ (18.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪಲಿಮಾರು ಕರ್ನಿರೆ = ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ == ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಪಂಜ ವಯಾ ಹಳೆಯಂಗಡಿ –  ಭದ್ರಾಯು ಚರಿತ್ರೆ 

ಕಟೀಲು ಮೂರನೇ ಮೇಳ==  ಅಡವಾಡಿ ಪೆರ್ಡೂರು – ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ನಾಲ್ಕನೇ ಮೇಳ  ==   ಮೇಲ್ಜಡ್ಡು ಹೌಸ್ ಬೇಳಿಂಜೆ ಹೆಬ್ರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ದೇಲಂತಬೆಟ್ಟು ವಯಾ ಶಿಬರೂರು – ಬ್ರಹ್ಮ ಕಪಾಲ

ಕಟೀಲು ಆರನೇ ಮೇಳ == ನಿಶ್ಮಿತಾ ಟವರ್ಸ್ ಮೂಡಬಿದ್ರಿ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  ==  ಹುಣ್ಸೆ ಅಡಿ ಹೊಸೂರು – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಅತ್ತಿಸರ ಶೇಡ್ಗಾರು 

ಮಂದಾರ್ತಿ ಮೂರನೇ ಮೇಳ  == ಮೇಳಿಗೆ ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಹುಣ್ಸೆ ಅಡಿ ಹೊಸೂರು – ಕೂಡಾಟ

ಮಂದಾರ್ತಿ ಐದನೇ ಮೇಳ  ==  ಯಡಾಡಿ ಮತ್ಯಾಡಿ 

ಹನುಮಗಿರಿ ಮೇಳ == ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಗೊರಟೆ ಮಹಾಸತಿ ಅಮ್ಮನವರ ದೈವಸ್ಥಾನ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ಬಾಳೆಬೇರು ಸಿದ್ಧಾಪುರ – ಸುದರ್ಶನ ವಿಜಯ, ಚಂದ್ರಹಾಸ ಚರಿತ್ರೆ, ಶ್ರೀನಿವಾಸ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುರುಡುಮನೆ ವಿನಯ ಬಾರ್ ರೋಡ್, ತೆಕ್ಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಕಳಿ ಬಾಗಲಬೆಟ್ಟು ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಉಗ್ರಾಣಿಮನೆ ಚಿಕ್ಲಾಡಿ ರಾಗಿಹಕ್ಲು 

ಶ್ರೀ ಪಾವಂಜೆ ಮೇಳ == ಶ್ರೀ ಜಲದುರ್ಗಾ ದೇವಸ್ಥಾನ ಪೆರುವಾಜೆ ಬೆಳ್ಳಾರೆ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಮಣಿಗಾರಡಿ ಜನ್ಸಾಲೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಚೇರ್ಕಾಡಿ ಸಂಜೀವಿ ಭಾಸ್ಕರ ಮನೆ ವಠಾರ – ಸಾಲಿಕೇರಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೈಂದೂರು ಶ್ರೀ ಸೆನೇಶ್ವರ ದೇವಸ್ಥಾನ – ಶ್ರೀಮಂತ ಶ್ರೀ ರಾಜ ಗುಳಿಗ 

ಶ್ರೀ ಮಡಾಮಕ್ಕಿ ಮೇಳ == ಬಾಡ ಕೆಂಪಿನಕೆರೆ ಜಟ್ಟಿಗೇಶ್ವರ ದೇವಸ್ಥಾನ – ಪಂಚಗಿರಿ ಪಂಜುರ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೈಂದೂರು ಶಿರೂರು ಶ್ರೀ ವೀರಗಲ್ಲು ಶ್ರೀ ವೀರ ಮಹಾಸತಿ ಅಮ್ಮನವರ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಹಿರಿಯಡಕ ಮೇಳ == ಯರುಕೋಣೆ ಹೊಸಗದ್ದೆ – ಶ್ರೀ ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಕುಳ್ಳಬಳ್ಳಿ ಮಹಾಗಣಪತಿ ದೇವಸ್ಥಾನ ವಠಾರ 

ಶ್ರೀ ನೀಲಾವರ ಮೇಳ  == ಅರೆಶಿರೂರು – ನೂತನ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ   ==  ಹೆದ್ದೂರು ವನಚೇತನ ನಿಸರ್ಗ ಆಶ್ರಮ -ಸಭಾಭವನ  ಶ್ರೀಕೃಷ್ಣ ಲೀಲಾಮೃತ 

ಶ್ರೀ ಮೇಗರವಳ್ಳಿ ಮೇಳ ==  ಬಿದ್ಕಲ್ ಕಟ್ಟೆ – ಶ್ರೀದೇವಿ ಚೌಡೇಶ್ವರಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮೂಡೂರ ಹಾಯಿಗುಳಿ ದೇವಸ್ಥಾನ ನೆಂಪು ಹಂದಕುಂದ – ದೀಕ್ಷಾ ಸಾಗರಿ 

ಶ್ರೀ ಹಾಲಾಡಿ ಮೇಳ == ಕೋಣಿ ಕೆಳಮನೆ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಕೋಟೆಬಾಗಿಲು – ಶಿವದುರ್ಗಾ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಸುಧೆಕ್ಕಾರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಕೆಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಕಂಚೀಲ್ದ ಪರಕೆ

ಶ್ರೀ ಗೆಜ್ಜೆಗಿರಿ ಮೇಳ == ಕಕ್ಕೆಪದವು ಶ್ರೀ ಪಂಚದುರ್ಗಾ ಪರಮೇಶ್ವರಿ ಕ್ಷೇತ್ರ – ವೃಷಭಾಸುರ ಕಾಳಗ, ಶ್ರೀನಿವಾಸ ಕಲ್ಯಾಣ 

ಪ್ರಥಮ ಯಕ್ಷಗಾನ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಮ್.ಪ್ರಭಾಕರ ಜೋಶಿಯವರ ಮನೆಗೆ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆಯವರು ಭೇಟಿ ನೀಡಿ

ಡಾ. ಎಮ್.ಪ್ರಭಾಕರ ಜೋಶಿ ಮತ್ತು ಶ್ರೀಮತಿ ಸುಚೇತಾ ಜೋಶಿಯವರನ್ನು ಅಭಿನಂದಿಸಿ, ಸುಮಾರು ಒಂದು ಗಂಟೆಗಳ ಕಾಲ ಅವರೊಂದಿಗಿದ್ದು ಎರಡು ದಿನದ ಸಮ್ಮೇಳನದ ರೂಪುರೇಷೆ ಮತ್ತು ಈವರೆಗೆ ಆದ ಬೆಳವಣಿಗೆಯನ್ನು ತಿಳಿಸಿ, ಸುದೀರ್ಘ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸಹ ಸಂಚಾಲಕರಾದ ಮುರಲಿ ಕಡೆಕಾರ್, ನವನೀತ್ ಶೆಟ್ಟಿ ಕದ್ರಿ ಮತ್ತು ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ.ಸುನಿಲ್ ಕುಮಾರ್‌ ಅವರು ದೂರವಾಣಿಯ ಮೂಲಕ ಡಾ.ಜೋಶಿಯವರನ್ನು ಆಹ್ವಾನಿಸಿ ಅಭಿನಂದಿಸಿದರು.

ಇಂದು ಮಾಡಾವಿನಲ್ಲಿ ಯಕ್ಷಗಾನ ಪ್ರದರ್ಶನ – ಶ್ರೀ ದೇವಿ ಮಹಾತ್ಮೆ 

ಇಂದು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆ ಎಂಬಲ್ಲಿ ಕಟೀಲು ಮೇಳದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಟೀಲು ಒಂದನೇ ಮೇಳದವರು ‘ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನವನ್ನು ಆಡಿ ತೋರಿಸಲಿದ್ದಾರೆ.

ವಿವರಗಳಿಗೆ ಕರಪತ್ರ ನೋಡಿ 

ಇಂದು ಆಟ ಎಲ್ಲೆಲ್ಲಿ? (14.01.2023, ಶನಿವಾರ)

ಮೇಳಗಳ ಇಂದಿನ (14.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬದ್ಯಾರು ಹಿಬರೋಡಿ ಅನುಗ್ರಹ ನಿಲಯದ ವಠಾರದಲ್ಲಿ – ಧನುರ್ಧರ ಧನಂಜಯ 

ಕಟೀಲು ಒಂದನೇ ಮೇಳ == ಮಾಡಾವುಕಟ್ಟೆ ಮಾಡಾವು ವಯಾ ಕುಂಬ್ರ ಪುತ್ತೂರು 

ಕಟೀಲು ಎರಡನೇ ಮೇಳ == ‘ ಶ್ರೀ ದೇವಿ ಪ್ರಸಾದ್’ ವಾಮಂಜೂರು ಮಂಗಳೂರು 

ಕಟೀಲು ಮೂರನೇ ಮೇಳ==  ಗರೋಡಿಮನೆ ಕುಂಪಣಮಜಲು ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿಪೇಟೆ 

ಕಟೀಲು ನಾಲ್ಕನೇ ಮೇಳ  ==  ಬಜಾಲ್ ಗಾಣದಬೆಟ್ಟು ವಯಾ ಪಡೀಲ್ ಮಂಗಳೂರು 

ಕಟೀಲು ಐದನೇ ಮೇಳ == ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ 

ಕಟೀಲು ಆರನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ರಥಬೀದಿ ಮಂಗಳೂರು 

ವಿಷಾಹಾರ ಸೇವನೆ ಪ್ರಕರಣ – ಕೇರಳ ರಾಜ್ಯದಲ್ಲಿ ಹೋಟೆಲ್ ಗಳ ಮೇಲೆ ವ್ಯಾಪಕ ದಾಳಿ, ಒಂದೇ ಕಡೆಯಿಂದ 500 ಕೆ.ಜಿ ಕೊಳೆತ ಮಾಂಸ ವಶ 

ಕೊಚ್ಚಿಯ ಮನೆಯಿಂದ 500 ಕೆಜಿ ಕೊಳೆತ ಮಾಂಸ ವಶಪಡಿಸಿಕೊಳ್ಳಲಾಗಿದೆ. ಹೋಟೆಲ್‌ಗಳಲ್ಲಿ ಷಾವರ್ಮಾ ತಯಾರಿಕೆಗೆ ಪೇರಿಸಿಟ್ಟಿದ್ದ ಮಾಂಸ ಇದಾಗಿತ್ತು.

ಆಹಾರ ವಿಷವಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದು ಇದೀಗ 500 ಕೆಜಿ ಕೊಳೆತ ಕೋಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಲಮಸ್ಸೆರಿಯ ಕೈಪಡಮುಗಲ್ ಎಂಬಲ್ಲಿನ ಮನೆಯೊಂದರಿಂದ ಕೊಳೆತ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ಕಲಮಶ್ಶೇರಿ ಪುರಸಭೆಯ ಆಹಾರ ಸುರಕ್ಷತಾ ವಿಭಾಗದವರು ನಡೆಸಿದ ತಪಾಸಣೆಯಲ್ಲಿ ಫ್ರೀಜರ್‌ನಲ್ಲಿ ಪೇರಿಸಿದ ಮಾಂಸ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಸಮೀಪದ ನಿವಾಸಿಗಳು ನೀಡಿದ ದೂರಿನ ಮೇರೆಗೆ ಪರಿಶೀಲನೆ ನಡೆಸಲಾಯಿತು.

ಗುರುವಾರ ಬೆಳಗ್ಗೆಯಿಂದ ತಪಾಸಣೆ ಆರಂಭವಾಯಿತು. ಕೊಚ್ಚಿಯ ಹೋಟೆಲ್‌ಗಳಲ್ಲಿ ಷಾವರ್ಮಾ ತಯಾರಿಸಲು ಮಾಂಸವನ್ನು ಪೇರಿಸಲಾಗಿತ್ತು. ಹಳಸಿದ ಮಾಂಸವನ್ನು ತಮಿಳುನಾಡಿನಿಂದ ತರಲಾಗಿತ್ತು.

ಪಾಲಕ್ಕಾಡ್‌ನ ಜುನೈಸ್‌ ಎಂಬುವವರ ಮನೆಯಿಂದ 150 ಕಿಲೋ ಹಳೆ ಎಣ್ಣೆಯನ್ನೂ ವಶಪಡಿಸಿಕೊಳ್ಳಲಾಗಿದೆ. ವಲಸೆ ಬಂದ ಹೋಟೆಲ್ ಉದ್ಯೋಗಿಗಳು ಇಲ್ಲಿ ತಂಗಿದ್ದರು. ಫ್ರೀಜರ್ ತೆರೆದ ತಕ್ಷಣ ದುರ್ವಾಸನೆ ಬರುತ್ತಿದೆ ಎಂದು ಫ್ರೀಜರ್‌ನ್ನು ಪರಿಶೀಲಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿವಿಧ ಹೋಟೆಲ್‌ಗಳಿಗೆ ಕಡಿಮೆ ಬೆಲೆಗೆ ಕೊಳೆತ ಮಾಂಸ ವಿತರಣೆಗೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದರು. ಈ ನಡುವೆ ಕಲಮಸೆರಿಯ ಬಾಡಿಗೆ ಮನೆಯಲ್ಲಿ ಕೊಳೆತ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ನಾಶ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಮಡಿಕೇರಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ – ಪೋಕ್ಸೋ ಕಾಯ್ದೆಯಡಿ ಪ್ರಕರಣ, ತಲೆಮರೆಸಿಕೊಂಡಿರುವ ಮುಖ್ಯ ಶಿಕ್ಷಕನ ಬಂಧನಕ್ಕೆ ವಿಶೇಷ ಪೊಲೀಸ್ ತಂಡ

ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೊಡಗಿನ ಪ್ರೌಢಶಾಲಾ ಶಿಕ್ಷಕರೊಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಡಿಕೇರಿ ತಾಲೂಕಿನ ಗ್ರಾಮಾಂತರ ಭಾಗದ ಸರಕಾರಿ ಅನುದಾನಿತ ಶಾಲೆಯಲ್ಲಿ ಘಟನೆ ವರದಿಯಾಗಿದೆ.

ಆರೋಪಿ ಮನೋಹರ್ ನಾಯ್ಕ್ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಶಾಲಾ ಶಿಕ್ಷಕಿ ಕಿರುಕುಳ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತರಲ್ಲಿ ಒಬ್ಬರು ತನ್ನ ತಾಯಿಯೊಂದಿಗೆ ಘಟನೆಯ ಬಗ್ಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ತನಗೆ ಮತ್ತು ಅದೇ ಶಾಲೆಯ ಮತ್ತೊಬ್ಬ ಬಾಲಕಿಗೆ ಮನೋಹರ್ ನಾಯ್ಕ್ ಕಿರುಕುಳ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ವಿವರಿಸಿದ್ದಾರೆ.

ಶಾಲೆಯ ಆಡಳಿತ ಮಂಡಳಿ ಕೂಡಲೇ ಅವರನ್ನು ಅಮಾನತುಗೊಳಿಸಿದೆ.

ಸಂತ್ರಸ್ತೆಯ ಪೋಷಕರೊಬ್ಬರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಮನೋಹರ್ ನಾಯ್ಕ್ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಕೊಡಗು ಶಿಕ್ಷಕರ ಸಂಘದ ಅಧ್ಯಕ್ಷರು. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

2 ಭಾರತ ನಿರ್ಮಿತ ಕೆಮ್ಮು ಸಿರಪ್‌ಗಳ ಬಳಕೆಯ ವಿರುದ್ಧ WHO ಎಚ್ಚರಿಕೆ – ಉಜ್ಬೇಕಿಸ್ತಾನ್‌ನಲ್ಲಿ 19 ಮಕ್ಕಳ ಸಾವಿಗೆ 2 ಭಾರತ ನಿರ್ಮಿತ ಕೆಮ್ಮು ಸಿರಪ್‌ ಕಾರಣವೆಂದು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ (WHO)

ಉಜ್ಬೇಕಿಸ್ತಾನ್‌ನಲ್ಲಿ ಕೆಮ್ಮು ಸಿರಪ್ ಸೇವಿಸಿದ ನಂತರ ಮಕ್ಕಳು ಸಾವನ್ನಪ್ಪಿದ ವರದಿಗಳು ಹೊರಹೊಮ್ಮುತ್ತಿದ್ದಂತೆ ನೋಯ್ಡಾ ಮೂಲದ ಫಾರ್ಮಾ ಮರಿಯನ್ ಬಯೋಟೆಕ್ ವಿರುದ್ಧ ಆಪಾದನೆಗಳು ಕೇಳಿಬಂದಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ನೋಯ್ಡಾ ಮೂಲದ ಕಂಪನಿ ಮರಿಯನ್ ಬಯೋಟೆಕ್ ತಯಾರಿಸಿದ ಎರಡು ಕೆಮ್ಮು ಸಿರಪ್‌ಗಳನ್ನು ಮಕ್ಕಳಿಗೆ ನೀಡಬಾರದು ಎಂದು ಶಿಫಾರಸು ಮಾಡಿದೆ.

“ಭಾರತದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮು ಸಿರಪ್‌ಗಳನ್ನು ಮಕ್ಕಳಿಗೆ ಬಳಸಬಾರದು, ಈ ಉತ್ಪನ್ನಗಳು ಉಜ್ಬೇಕಿಸ್ತಾನ್‌ನಲ್ಲಿ 19 ಸಾವುಗಳಿಗೆ ಕಾರಣವಾಗಿವೆ” ಎಂದು WHO ಹೇಳಿಕೆಯಲ್ಲಿ ತಿಳಿಸಿದೆ. “ಎರಡು ಉತ್ಪನ್ನಗಳೆಂದರೆ AMBRONOL ಸಿರಪ್ ಮತ್ತು DOK-1 ಮ್ಯಾಕ್ಸ್ ಸಿರಪ್. ಎರಡೂ ಉತ್ಪನ್ನಗಳ ತಯಾರಕರು ಮೇರಿಯನ್ ಬಯೋಟೆಕ್ (ಉತ್ತರ ಪ್ರದೇಶ, ಭಾರತ) ಎಂದು ಹೇಳಲಾಗಿದೆ.

ಪ್ರಯೋಗಾಲಯದ ವಿಶ್ಲೇಷಣೆಯು ಎರಡೂ ಉತ್ಪನ್ನಗಳಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು / ಅಥವಾ ಎಥಿಲೀನ್ ಅನ್ನು ಹೊಂದಿದೆ ಎಂದು ಅದು ಹೇಳಿದೆ. ಡಿಸೆಂಬರ್ ನಲ್ಲಿ, ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯವು ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿದ ನಂತರ ದೇಶದಲ್ಲಿ ಸುಮಾರು 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದೆ.

“ಈ ಎರಡೂ ಉತ್ಪನ್ನಗಳು ಈ ಪ್ರದೇಶದ ಇತರ ದೇಶಗಳಲ್ಲಿ ಮಾರ್ಕೆಟಿಂಗ್ ಅಧಿಕಾರವನ್ನು ಹೊಂದಿರಬಹುದು. ಅನೌಪಚಾರಿಕ ಮಾರುಕಟ್ಟೆಗಳ ಮೂಲಕ ಇತರ ದೇಶಗಳು ಅಥವಾ ಪ್ರದೇಶಗಳಿಗೆ ವಿತರಿಸಿರಬಹುದು” ಎಂದು WHO ಎಚ್ಚರಿಕೆಯಲ್ಲಿ ಹೇಳಲಾಗಿದೆ. ಯುಎನ್ ಆರೋಗ್ಯ ಸಂಸ್ಥೆಯು ‘ಈ ಎಚ್ಚರಿಕೆಯಲ್ಲಿ ಉಲ್ಲೇಖಿಸಲಾದ ಗುಣಮಟ್ಟವಿಲ್ಲದ ಉತ್ಪನ್ನಗಳು ಅಸುರಕ್ಷಿತವಾಗಿವೆ ಮತ್ತು ಅವುಗಳ ಬಳಕೆಯು, ವಿಶೇಷವಾಗಿ ಮಕ್ಕಳಲ್ಲಿ, ಗಂಭೀರವಾದ ಗಾಯ ಅಥವಾ ಸಾವಿಗೆ ಕಾರಣವಾಗಬಹುದು.’

ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳ ಸಾವಿಗೆ ಸಂಬಂಧಿಸಿ ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮರಿಯನ್ ಬಯೋಟೆಕ್ ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿದೆ.

“ಸಾಕಷ್ಟು ದಾಖಲೆಗಳನ್ನು ಒದಗಿಸದ ಕಾರಣ ನಾವು ಮೇರಿಯನ್ ಬಯೋಟೆಕ್ ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿದ್ದೇವೆ. ಅವರು ನೀಡದ ಪರಿಶೀಲನೆಯ ಸಮಯದಲ್ಲಿ ಕೇಳಿದ ದಾಖಲೆಗಳ ಆಧಾರದ ಮೇಲೆ ರಾಜ್ಯ ಪರವಾನಗಿ ಪ್ರಾಧಿಕಾರದಿಂದ ಶೋಕಾಸ್ ನೋಟಿಸ್ ನೀಡಲಾಗಿದೆ” ಎಂದು ಗೌತಮ್ ಬುದ್ಧ ನಗರದ ಡ್ರಗ್ ಇನ್ಸ್‌ಪೆಕ್ಟರ್ ವೈಭವ್ ಬಬ್ಬರ್ ಹೇಳಿದರು.

ಕೆಲವು ತಿಂಗಳುಗಳ ಹಿಂದೆ ಗ್ಯಾಂಬಿಯಾದಲ್ಲಿ ತೀವ್ರವಾದ ಮೂತ್ರಪಿಂಡದ ಗಾಯಗಳು ಮತ್ತು 66 ಮಕ್ಕಳ ಸಾವುಗಳೊಂದಿಗೆ “ಸಂಭಾವ್ಯವಾಗಿ ಸಂಬಂಧಿಸಿರುವ” ಭಾರತೀಯ ಔಷಧ ತಯಾರಕರಾದ ಮೈಡೆನ್ ಫಾರ್ಮಾ ತಯಾರಿಸಿದ ನಾಲ್ಕು “ಕಲುಷಿತ” ಕೆಮ್ಮು ಸಿರಪ್‌ಗಳಿಗೆ WHO ಎಚ್ಚರಿಕೆ ನೀಡಿದ ತಿಂಗಳುಗಳ ನಂತರ ಈ ಪ್ರಕರಣ ಸಂಭವಿಸಿದೆ.

ಇಂದು ಆಟ ಎಲ್ಲೆಲ್ಲಿ (12.01.2023, ಗುರುವಾರ)

ಮೇಳಗಳ ಇಂದಿನ (12.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುಚ್ಚೂರು ನೆಲ್ಲಿಜೆ ಮಾನಸ ಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಅನುಗ್ರಹನಿವಾಸ ಪಾಚುಕೋಡಿ ಕಡೇಶಿವಾಲಯ 

ಕಟೀಲು ಎರಡನೇ ಮೇಳ == ಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು 

ಕಟೀಲು ಮೂರನೇ ಮೇಳ==  ಎಕ್ಕಾರು ಬಡಕರೆ – ಕೆ.ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕರು ಶ್ರೀ ಕ್ಷೇತ್ರ ಕಟೀಲು 

ಕಟೀಲು ನಾಲ್ಕನೇ ಮೇಳ  ==  ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಐದನೇ ಮೇಳ == ಶ್ರೀ ಸಿದ್ದಿವಿನಾಯಕ ರಂಗಮಂದಿರದ ಬಳಿ ಕಣ್ಣೂರು ವಯಾ ಪಡೀಲ್ 

ಕಟೀಲು ಆರನೇ ಮೇಳ == ಕೊಂಪದವು ವಯಾ ಗಂಜಿಮಠ 

ಮಂದಾರ್ತಿ ಒಂದನೇ ಮೇಳ  ==  ಸೌಮ್ಯನಿಲಯ, ನಾಯಕವಾಡಿ ಗುಜ್ಜಾಡಿ 

ಮಂದಾರ್ತಿ ಎರಡನೇ ಮೇಳ   == ದಾಸರಬೆಟ್ಟು ಗುಲ್ವಾಡಿ ನೇರಳಕಟ್ಟೆ 

ಮಂದಾರ್ತಿ ಮೂರನೇ ಮೇಳ  == ಮರಕಾಲರಮನೆ ನಲ್ಕುದ್ರುತೋಟ ಹನೇಹಳ್ಳಿ ಬಾರ್ಕೂರು 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀದೇವಿನಿವಾಸ ಕುಂಜೂರು ಕೇರಿಮನೆ ಬೈದೆಬೆಟ್ಟು 

ಮಂದಾರ್ತಿ ಐದನೇ ಮೇಳ  ==  ಭಂಡಿಮಠ ಕೂರಾಡಿ 

ಹನುಮಗಿರಿ ಮೇಳ == ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ರಥಬೀದಿ – ಭಾರತ ಜನನಿ 

ಶ್ರೀ ಪೆರ್ಡೂರು ಮೇಳ == ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರಕೂರು – ಸುದರ್ಶನ, ಚಂದ್ರಹಾಸ ಚರಿತ್ರೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ ==  ಧರ್ಮಶ್ರೀ ನಿಲಯ ಕೊಲಗೇರಿ ಮನೆ ಮಧುವನ ಅಚ್ಲಾಡಿ ಬ್ರಹ್ಮಾವರ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ನಂದಿಕೇಶ್ವರ ನಿಲಯ ಮಡಿವಾಳರಮನೆ ಇಡೂರು ಕುಂಜ್ಞಾಡಿ, ಮಾರಣಕಟ್ಟೆ X ಸೌಕೂರು ಮೇಳ ಕೂಡಾಟ

ಶ್ರೀ ಪಾವಂಜೆ ಮೇಳ == ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿ – ನಾಗ ಸಂಜೀವನ 

ಶ್ರೀ ಕಮಲಶಿಲೆ ಮೇಳ == ಬಾಸುಬೈಲುಮಠ ಬಿದ್ಕಲ್ ಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮೈನಾಡಿಮನೆ ಮೂಡುಗಿಳಿಯಾರು 

ಶ್ರೀ ಸೌಕೂರು ಮೇಳ == ನಂದಿಕೇಶ್ವರ ನಿಲಯ ಮಡಿವಾಳರಮನೆ ಇಡೂರು ಕುಂಜ್ಞಾಡಿ, ಮಾರಣಕಟ್ಟೆ X ಸೌಕೂರು ಮೇಳ ಕೂಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಹೆಬ್ರಿ ಬಲ್ಲಾಳ್ ಕಾಂಪ್ಲೆಕ್ಸ್ ಮುಂಭಾಗ – ಸತ್ಯದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಆತ್ರಾಡಿ ಪೇಟೆ – ಪಂಚಗಿರಿ ಪಂಜುರ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಭದ್ರಗಿರಿ ಆಟೋ ನಿಲ್ದಾಣ ಬಳಿ – ಮಂತ್ರಮಾಂಗಲ್ಯ 

ಶ್ರೀ ಹಿರಿಯಡಕ ಮೇಳ == ಬಜಾಲ್ ಪೂಂಜರಬೆಟ್ಟು ಗದ್ದೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಗುಂಡ್ಮಿ ಯಕ್ಷಾಮಠ ಸಾಸ್ತಾನ 

ಶ್ರೀ ಸಿಗಂದೂರು ಮೇಳ == ಗೋಳಿ ಅಂಗಡಿ ಹೊಯ್ಗಿ ಬಿಳಾಲ್ 

ಶ್ರೀ ಮೇಗರವಳ್ಳಿ ಮೇಳ ==  ಸಂಪೆಕಟ್ಟೆ ನಿಟ್ಟೂರು – ಶ್ರೀ ಚೌಡೇಶ್ವರಿ ಮಹಿಮೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಂಕಾಳಿ ದೇವಸ್ಥಾನ ಬೆಳ್ಳಾಡಿ – ಬೆಳ್ಳಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕಲ್ಲಾಟೆ ಬೆಳಿನಬೆಟ್ಟು – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಎರಗೇಶ್ವರ ದೇವಸ್ಥಾನ ಶಿರೂರು, ಮೇಲ್ ಪಂಕ್ತಿ, ನೀರ್ ಗದ್ದೆ – ಶಿವದುರ್ಗಾ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ – ಶ್ರೀ ಭಗವತೀ ಮಹಾತ್ಮೆ 

ಶ್ರೀ ಗೆಜ್ಜೆಗಿರಿ ಮೇಳ == ಶ್ರೀ ಕ್ಷೇತ್ರ ಪೊಳಲಿ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ವಿಜ್ಞಾನ ಸಮಾವೇಶದಲ್ಲಿ ಸತತ 14 ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ

30ನೇ ಯ ವಿಜ್ಞಾನ ಸಮಾವೇಶದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನದೊಂದಿಗೆ ಸತತ 14 ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ


30ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ ((National Children’s Science Congress)) ಸ್ಪರ್ಧೆಯು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ ಜಿಲ್ಲೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೇ, ಭಾರತ ಸರಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರಕಾರ ಇವುಗಳ ಸಹಯೋಗದೊಂದಿಗೆ ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆಯಲ್ಲಿ 9 ಜನವರಿ 2023 ರಂದು ನಡೆದಿದ್ದು

ಸೀನಿಯರ್ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳಾದ ಸಾನ್ವಿ ಎಸ್.ಪಿ 9ನೇ ತರಗತಿ ( ಶ್ರೀ ಸುಂದರ ಪೂಜಾರಿ ಹಾಗೂ ಶ್ರೀಮತಿ ಭವಿತಾ ಪಿ ದಂಪತಿಗಳ ಪುತ್ರಿ) ಹಾಗೂ ಪ್ರತೀಕ್ಷಾ ಆಳ್ವಾ, 9 ನೇ ತರಗತಿ (ಶ್ರೀ ಎ ಸಿ ಚಂದ್ರಶೇಖರ ಆಳ್ವ ಹಾಗೂ ಶ್ರೀಮತಿ ಉಷಾ ಸಿ ಆಳ್ವಾ ದಂಪತಿಗಳ ಪುತ್ರಿ) ಅವರ ತಂಡ ““MULTI PURPOSE SOLAR DRYER”” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ ಪ್ರಥಮ ಸ್ಥಾನ,

ಅಭಿರಾಮ ಭಟ್ – 10ನೇ ತರಗತಿ (ಶ್ರೀ ನಾರಾಯಣ ಪ್ರಸಾದ್ ಪಿ.ಎಸ್ ಹಾಗೂ ಶ್ರೀಮತಿ ರಮ್ಯ ಕಾವೇರಿ ದಂಪತಿಗಳ ಪುತ್ರ) ಮತ್ತು ಅಜೇಯ ರಾಮ, 9ನೇ ತರಗತಿ (ಶ್ರೀ ಕೇಶವ ಮೂರ್ತಿ ಹಾಗೂ ಶ್ರೀಮತಿ ಗೀತಾ ಲಕ್ಷ್ಮೀ ದಂಪತಿಗಳ ಪುತ್ರ) ಅವರ ತಂಡ ““BEE N NATURE” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಈ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 36 ತಂಡಗಳು ಭಾಗವಹಿಸಿದ್ದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 2 ತಂಡಗಳು ಕಲಬುರ್ಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತವೆ.

ಈ ಮೂಲಕ ಸತತ 14 ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಾಧನೆ ಸಂಸ್ಥೆಯ ವಿದ್ಯಾರ್ಥಿಗಳದ್ದಾಗಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.