Tuesday, September 1, 2026
Home Blog Page 264

ಇಂದು ಆಟ ಎಲ್ಲೆಲ್ಲಿ? (29-05-2022)

ಮೇಳಗಳ ಇಂದಿನ (29.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಕಮಲಶಿಲೆ ಮೇಳ == ಹೆಸ್ಕುಂದ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ

ಹುಲಿಯನ್ನು ಓಡಿಸಿದ ಕರಡಿ: ವೀಡಿಯೊ ವೈರಲ್

ವೈರಲ್ ವಿಡಿಯೋ: ಮಹಾರಾಷ್ಟ್ರ ಅರಣ್ಯದಲ್ಲಿ ಹುಲಿಯ ಹಿಂದೆ ಓಡಿದ ಉಗ್ರ ಕರಡಿ, ಮುಂದೆ ಏನಾಗುತ್ತದೆ ಎಂಬುದನ್ನು ವೀಕ್ಷಿಸಿ

ವೈರಲ್ ವೀಡಿಯೋ: ಅನಿಮೇಟೆಡ್ ಡಿಸ್ನಿ ಚಲನಚಿತ್ರ ದಿ ಜಂಗಲ್ ಬುಕ್‌ನಿಂದ ಮೋಗ್ಲಿಯನ್ನು ಅವನ ಕರಡಿ ಸ್ನೇಹಿತ ಬಾಲೂ ಕೆಟ್ಟ ಹುಲಿ ಶೇರ್ ಖಾನ್‌ನಿಂದ ರಕ್ಷಿಸಿದ ದೃಶ್ಯ ನಿಮಗೆ ನೆನಪಿದೆಯೇ? ಕರಡಿ ಮತ್ತು ಹುಲಿ ಇತ್ತೀಚೆಗೆ ನಿಜ ಜೀವನದಲ್ಲಿ ಇದೇ ರೀತಿಯ ಮುಖಾಮುಖಿಯಾಗಿ ಕಾಣಿಸಿಕೊಂಡಿವೆ.

ಈ ವಿಡಿಯೋ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಈ ಘಟನೆಯನ್ನು ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ತಡೋಬಾದ T19 ಹೆಸರಿನ ಹುಲಿಯು ದಾರಿಯಲ್ಲಿ ನಿಲ್ಲುವ ಮೂಲಕ ಕರಡಿಯನ್ನು ಕೆರಳಿಸಿತು. ಕರಡಿಯ ಮುಂದೆ ಹುಲಿ ನಿಂತು ಅದರ ದಾರಿಯನ್ನು ತಡೆಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಕರಡಿ ಕೋಪಗೊಂಡು ಹುಲಿಯ ಮೇಲೆ ದಾಳಿ ಮಾಡಲು ಹಿಂಬಾಲಿಸುತ್ತದೆ. ಕರಡಿ ಎಷ್ಟು ಕೆರಳುತ್ತದೆ ಎಂಬುದನ್ನು ನೋಡಿ, ಹುಲಿ ಹೆದರಿ ಕರಡಿಯಿಂದ ಓಡಿಹೋಗಲು ಪ್ರಾರಂಭಿಸುತ್ತದೆ.

ಕೆರಳಿದ ಕರಡಿ ಹುಲಿಯನ್ನು ಹಿಂಬಾಲಿಸಿ ಅದರ ಮೇಲೆ ದಾಳಿ ಮಾಡುವ ಪ್ರಯತ್ನವನ್ನು ಮುಂದುವರೆಸಿದೆ. ಆದಾಗ್ಯೂ, ಕರಡಿಯ ಕೋಪವು ಎಷ್ಟು ಮಾರಣಾಂತಿಕವಾಗಿದೆ ಎಂದು ಹುಲಿಗೆ ತಿಳಿದಿದೆ ಮತ್ತು ತಪ್ಪಿಸಿಕೊಳ್ಳಲು ಯೋಚಿಸಿತು.

ಯುವತಿಯ ಉಡುಪು ಎಳೆದ ತುಂಟ ಕೋತಿ: ವೀಡಿಯೊ ವೈರಲ್

ಯುವತಿಯ ಉಡುಪು ಎಳೆದ ತುಂಟ ಕೋತಿ: ವೀಡಿಯೊ ವೈರಲ್ 

ತುಂಟ ಕೋತಿಯೊಂದು ಯುವತಿಯೊಬ್ಬಳ ಉಡುಪನ್ನು ಎತ್ತಿ ಎಳೆಯುತ್ತದೆ. ಅವಳು ಅದರ ಕೈಯನ್ನು ದೂರ ಮಾಡುತ್ತಾಳೆ. ಕೋತಿಯು ಮಹಿಳೆಯ ಉಡುಪಿನ ಕೆಳಗೆ ನೋಡಲು ಪ್ರಯತ್ನಿಸುತ್ತದೆ ಮತ್ತು ಅವಳು ತನ್ನ ಕೈಯನ್ನು ಬಿಟ್ಟು ತನ್ನ ಉಡುಪನ್ನು ಕೆಳಗೆ ಹಾಕುತ್ತಾಳೆ.

ಮಂಕಿ ವೈರಲ್ ವಿಡಿಯೋ: ಮಂಗವೊಂದು ಮಹಿಳೆಯ ಡ್ರೆಸ್ ಮೇಲೆತ್ತಿ ಅದರ ಕೆಳಗೆ ನೋಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿರುವ ಹಾಸ್ಯಾಸ್ಪದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘ನ್ಯಾಚರ್’ ​​ಪೇಜ್ ಹಂಚಿಕೊಂಡಿದೆ.

ಇದು 253 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಮತ್ತು 10 ಸಾವಿರ ಇಷ್ಟಗಳನ್ನು ಪಡೆದುಕೊಂಡಿದೆ. ಜೆನ್ ಎಂಬ ಮಹಿಳೆ ಪಾರ್ಕ್‌ನಲ್ಲಿ ಕುಳಿತು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡುವಾಗ ಕೆಲವು ಮುದ್ದಾದ ಕೋತಿಗಳು ನೋಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಎರಡು ಕೋತಿಗಳಲ್ಲಿ ಒಂದು ಅವಳ ಕಡೆಗೆ ಓಡಿಹೋಗುವುದನ್ನು ಕಾಣಬಹುದು ಮತ್ತು ಅವಳ ಸ್ಪಷ್ಟವಾದ ಸ್ಫಟಿಕ ಶಿಲೆಯ ಸ್ಫಟಿಕ ಹಾರವನ್ನು ಮುಟ್ಟುತ್ತದೆ ಮತ್ತು ನಂತರ ಹಿಂತಿರುಗುತ್ತದೆ. ಅವಳು ಕೋತಿಗೆ “ಹಾಯ್” ಎಂದು ಹೇಳುತ್ತಾಳೆ ಮತ್ತು ಅವಳ ಹಾರವನ್ನು ಪರೀಕ್ಷಿಸಲು ಅವಕಾಶ ಮಾಡಿಕೊಡುತ್ತಾಳೆ.

ಸ್ವಲ್ಪ ಸಮಯದ ನಂತರ, ಮತ್ತೊಂದು ಕೋತಿ ಹತ್ತಿರ ಬಂದು ತನ್ನ ನೀಲಿ ಉಡುಪನ್ನು ಹಿಂಭಾಗದಿಂದ ಎತ್ತುತ್ತದೆ ಮತ್ತು ಅವಳು ನಗುತ್ತಾ ವೀಡಿಯೊವನ್ನು ರೆಕಾರ್ಡ್ ಮಾಡುವುದನ್ನು ಮುಂದುವರಿಸುತ್ತಾಳೆ. ಏತನ್ಮಧ್ಯೆ, ಕೋತಿಯು ಮಹಿಳೆಯ ಉಡುಪಿನ ಕೆಳಗೆ ನೋಡಲು ಪ್ರಯತ್ನಿಸುತ್ತದೆ, ಅವಳು ತನ್ನ ಕೈಯನ್ನು ತಿರುಗಿಸಿ ಅವಳ ಉಡುಪನ್ನು ಕೆಳಗೆ ಹಾಕುತ್ತಾಳೆ.

ಕೋತಿ ಹೊರಟು ಹೋಗುತ್ತದೆ ಮತ್ತು ಮಹಿಳೆಯು ಕೋತಿಯು ಏನು ಮಾಡಲು ಪ್ರಯತ್ನಿಸಿದೆ ಎಂಬುದನ್ನು ತಡೆಯಲಾಗದೆ ನಗುತ್ತಿರುವುದನ್ನು ಕಾಣಬಹುದು.

ಇಂದು ಆಟ ಎಲ್ಲೆಲ್ಲಿ? (28-05-2022)

ಮೇಳಗಳ ಇಂದಿನ (28.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ ಆಟ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ ಆಟ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ ಆಟ 

ಶ್ರೀ ಕಮಲಶಿಲೆ ಮೇಳ == ಶ್ರೀ ಕ್ಷೇತ್ರದಲ್ಲಿ

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ ಆಟ 

ಇಂದು ಆಟ ಎಲ್ಲೆಲ್ಲಿ? (27-05-2022)

ಮೇಳಗಳ ಇಂದಿನ (27.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಸೇವೆಯಾಟ -ನೂತನ ಪ್ರಸಂಗ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

\

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಚಿತ್ತೂರು ಗುಡ್ಕಲ್ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬದನೆಹಿತ್ಲು ತೀರ್ಥಹಳ್ಳಿ 

ಶ್ರೀ ಶನೀಶ್ವರ ಮೇಳ == ಮಾವಿನಕೋಡ್ಲು ಜನ್ಸಾಲೆ 

ಮೇ.27: ಬಾನುಲಿಯಲ್ಲಿ ‘ಮಾ ನಿಷಾದ’ಯಕ್ಷಗಾನ ತಾಳಮದ್ದಳೆ ಪ್ರಸಾರ

ಮಂಗಳೂರು: ಕರ್ನಾಟಕ ಯಕ್ಷಭಾರತಿ ಪುತ್ತೂರು ಪ್ರಸ್ತುತ ಪಡಿಸುವ ‘ಮಾ ನಿಷಾದ’ ಯಕ್ಷಗಾನ ತಾಳಮದ್ದಳೆ ಆಕಾಶವಾಣಿ ಮಂಗಳೂರು ನಿಲಯದಿಂದ ಮೇ 27, 2022 ರಂದು (ನಾಳೆ) ಶುಕ್ರವಾರ ರಾತ್ರಿ ಗಂ.9.30 ಕ್ಕೆ ಪ್ರಸಾರವಾಗಲಿದೆ.

ಯಕ್ಷಗಾನ ವಾಲ್ಮೀಕಿ ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಜನಪ್ರಿಯ ಪ್ರಸಂಗ ‘ಮಾ ನಿಷಾದ’ ವನ್ನು ಯಕ್ಷಭಾರತಿಯ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಬಾನುಲಿ ಕಾರ್ಯಕ್ರಮಕ್ಕಾಗಿ ಸಂಯೋಜಿಸಿದ್ದಾರೆ.          

ಹಿಮ್ಮೇಳದಲ್ಲಿ ಪ್ರಶಾಂತ್ ರೈ ಪುತ್ತೂರು, ಪದ್ಯಾಣ ಜಯರಾಂ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಭಾಗವಹಿಸಿದ್ದಾರೆ.

ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಕೆ.ರಮೇಶಾಚಾರ್ಯ, ಗಣರಾಜ ಕುಂಬಳೆ, ರಮೇಶ ಸಾಲ್ವಣ್ಕರ್ ಮತ್ತು ಉಮೇಶಾಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ಪಾತ್ರವಹಿಸಿದ್ದಾರೆ.       

ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಪಿ.ಎಸ್. ಸೂರ್ಯನಾರಾಯಣ ಭಟ್ ಈ ಕಾರ್ಯಕ್ರಮವನ್ನು ನಿರ್ಮಿಸಿ ಪ್ರಸಾರಕ್ಕೆ ಅಳವಡಿಸಿದ್ದಾರೆ.

ಇಂದು ಆಟ ಎಲ್ಲೆಲ್ಲಿ? (26-05-2022)

ಮೇಳಗಳ ಇಂದಿನ (26.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಸೇವೆಯಾಟ -ನೂತನ ಪ್ರಸಂಗ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಕಮಲಶಿಲೆ ಮೇಳ == ಗುಡಿಕೇರಿ ಉಳ್ಳೂರು -74

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಶನೀಶ್ವರ ಮೇಳ == ಚೌಕುಳಮಕ್ಕಿ ಶಾಲಾ ವಠಾರ – ಕವಿರತ್ನ ಕಾಳಿದಾಸ, ಬೇಡರ ಕಣ್ಣಪ್ಪ 

ಇಂದು ಆಟ ಎಲ್ಲೆಲ್ಲಿ? (25-05-2022)

ಮೇಳಗಳ ಇಂದಿನ (25.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ನೂತನ ಪ್ರಸಂಗ 

ಕಟೀಲು ಒಂದನೇ ಮೇಳ == ಶ್ರೀ ಕ್ಷೇತ್ರ ಕಟೀಲು – ಆರೂ ಮೇಳಗಳ ಪತ್ತನಾಜೆ ಸೇವೆಯಾಟ 

ಕಟೀಲು ಎರಡನೇ ಮೇಳ == ಶ್ರೀ ಕ್ಷೇತ್ರ ಕಟೀಲು – ಆರೂ ಮೇಳಗಳ ಪತ್ತನಾಜೆ ಸೇವೆಯಾಟ 

ಕಟೀಲು ಮೂರನೇ ಮೇಳ== ಶ್ರೀ ಕ್ಷೇತ್ರ ಕಟೀಲು – ಆರೂ ಮೇಳಗಳ ಪತ್ತನಾಜೆ ಸೇವೆಯಾಟ 

ಕಟೀಲು ನಾಲ್ಕನೇ ಮೇಳ  == ಶ್ರೀ ಕ್ಷೇತ್ರ ಕಟೀಲು – ಆರೂ ಮೇಳಗಳ ಪತ್ತನಾಜೆ ಸೇವೆಯಾಟ 

ಕಟೀಲು ಐದನೇ ಮೇಳ == ಶ್ರೀ ಕ್ಷೇತ್ರ ಕಟೀಲು – ಆರೂ ಮೇಳಗಳ ಪತ್ತನಾಜೆ ಸೇವೆಯಾಟ 

ಕಟೀಲು ಆರನೇ ಮೇಳ == ಶ್ರೀ ಕ್ಷೇತ್ರ ಕಟೀಲು – ಆರೂ ಮೇಳಗಳ ಪತ್ತನಾಜೆ ಸೇವೆಯಾಟ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಸುಣ್ಣದಗುಂಡಿ ಹೊಸೂರು 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಸೇವೆಯಾಟ – ಕಲ್ಯಾಣತ್ರಯ 

ಶ್ರೀ ಕಮಲಶಿಲೆ ಮೇಳ == ಮಾರ್ಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ ==  ಶ್ರೀ ಕ್ಷೇತ್ರ ಸೌಕೂರು – ದೇವರ ಸೇವೆಯಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಶ್ರೀ ಕ್ಷೇತ್ರ ಕಳವಾರು – ದೇವರ ಕೊನೆಯ ಸೇವೆಯಾಟ 

ಶ್ರೀ ಶನೀಶ್ವರ ಮೇಳ == ನಾಗ ಮತ್ತು ಯಕ್ಷಿ ದೇವಸ್ಥಾನ ಮೂಡುಗೋಪಾಡಿ 

ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಉಡುಪಿ : ಯಕ್ಷಗಾನ ಕಲಾರಂಗ ಕಳೆದ 24 ವರ್ಷಗಳಿಂದ ಆಯೋಜಿಸುತ್ತಾ ಬಂದ ತಾಳಮದ್ದಲೆ ಸಪ್ತಾಹ ‘ಉತ್ತರ ರಾಮಾಯಣ’ ಇಂದು (23-05-2022) ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.

ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ತಾಳಮದ್ದಲೆ ನಮ್ಮ ಪುರಾಣಲೋಕವನ್ನು ಅನಾವರಣಗೊಳಿಸುವ ವಿಶಿಷ್ಟ ಕಲಾಪ್ರಕಾರ. ಅರ್ಥಧಾರಿಗಳು ಮೂಲ ಕೃತಿಗೆ ಚ್ಯುತಿ ಬಾರದಂತೆ ವಿಷಯ ಪ್ರತಿಪಾದಿಸಿ ಜನಮಾನಸಕ್ಕೆ ನಮ್ಮ ಪುರಾಣ ಸಂಪತ್ತನ್ನು ತಲುಪಿಸಬೇಕೆಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.

ಜ್ಯೋತಿಷ್ಯವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ, ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಪಿ. ನಿತ್ಯಾನಂದ ರಾವ್, ಮಂಜೇಶ್ವರದ ಕಲಾ ಸಂಘಟಕ ಸಂಕಬೈಲು ಸತೀಶ ಅಡಪ ಅಭ್ಯಾಗತರಾಗಿ ಆಗಮಿಸಿ ಶುಭಕೋರಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಣೆಗೈದ ಕಾರ್ಯಕ್ರಮದ ಕೊನೆಗೆ ಎ. ನಟರಾಜ ಉಪಾಧ್ಯ ಧನ್ಯವಾದ ಸಮರ್ಪಿಸಿದರು. ಬಳಿಕ ಪ್ರಸಿದ್ಧ ಅರ್ಥಧಾರಿಗಳಿಂದ ‘ಅಗ್ನಿಪರೀಕ್ಷೆ’ ತಾಳಮದ್ದಲೆ ಸಂಪನ್ನಗೊ0ಡಿತು.

ಇಂದು ಆಟ ಎಲ್ಲೆಲ್ಲಿ? (24-05-2022)

ಮೇಳಗಳ ಇಂದಿನ (24.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಹತ್ತನಾವಧಿ ಜಾತ್ರೆ 

ಕಟೀಲು ಒಂದನೇ ಮೇಳ == ಬಜಪೆ ಬಸ್ ಸ್ಟಾಂಡ್ ಬಳಿ 

ಕಟೀಲು ಎರಡನೇ ಮೇಳ == ಶ್ರೀಧಾಮ ಮಾಣಿಲ ವಯಾ ಪೆರುವಾಯಿ 

ಕಟೀಲು ಮೂರನೇ ಮೇಳ==  ಕುತ್ತೆತ್ತೂರು ಸೂರಿಂಜೆ ಪೊನ್ನಗಿರಿ ದೇವಸ್ಥಾನದ ವಠಾರ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ  

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಆರನೇ ಮೇಳ == ಗಾಂಧಿನಗರ ಕಾವೂರು 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ನಾಗಶ್ರೀ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಂಜುನಾಥ ನಿಲಯ ಬಂಕೇಶ್ವರ ಬೈಂದೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಮೂಡಬಿದ್ರಿ ಆಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀರಾಮ ಕಥಾಮೃತ 

ಶ್ರೀ ಕಮಲಶಿಲೆ ಮೇಳ == ಹೊಸಬಾಳು ಶಂಕರನಾರಾಯಣ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಗೋಪಾಡಿ ಶ್ರೀ ಬೊಬ್ಬರ್ಯ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀಕೃಷ್ಣ ಲೀಲಾಮೃತ 

ಶ್ರೀ ಶನೀಶ್ವರ ಮೇಳ == ವಿನಾಯಕ ನಗರ ಕುಂಭಾಶಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವೀರ ಜಟ್ಟಿಗೇಶ್ವರ ದೇವಸ್ಥಾನ ಕೀರ್ತಿನಗರ ಚೌತನಿ ಭಟ್ಕಳ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ – ಚಂದ್ರಹಾಸ ಚರಿತ್ರೆ, ಗಿರಿಜಾ ಕಲ್ಯಾಣ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಶ್ರೀ ಕ್ಷೇತ್ರದಲ್ಲಿ – ಕೊನೆಯ ದೇವರ ಸೇವೆ – ಮುಗುರು ಮಲ್ಲಿಗೆ, ಗಿರಿಜಾ ಕಲ್ಯಾಣ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರದಲ್ಲಿ ಕೊನೆಯ ಸೇವೆಯಾಟ – ಪಟ್ಟದ ಮಣೆ, ಗಿರಿಜಾ ಕಲ್ಯಾಣ