Friday, July 31, 2026
Home Blog Page 119

ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ 3 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ

ವಿದ್ಯಾ ಭಾರತಿ ಅಖಿಲ್ ಭಾರತೀಯ ಶಿಕ್ಷಣ ಪ್ರತಿಷ್ಠಾನ ಮತ್ತು ಗೀತಾ ಆವಾಸಿಯ ವಿದ್ಯಾಲಯ ಕುರುಕ್ಷೇತ್ರ ಹರಿಯಾಣ ಇಲ್ಲಿ ನವೆಂಬರ್ 19ರಿಂದ 23ರ ವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 3 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಪಡೆದುಕೊಂಡಿದ್ದು 14ರ ವಯೋಮಾನದ ಬಾಲಕಿಯ ವಿಭಾಗದಲ್ಲಿ ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ಕೃತಿ ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ ದಂಪತಿ ಪುತ್ರಿ) 4 X 100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ, 600ಮೀ ನಲ್ಲಿ ದ್ವಿತೀಯ, 400 ಮೀಟರ್ ನಲ್ಲಿ ತೃತೀಯ ಸ್ಥಾನ, 8ನೇ ತರಗತಿ ಯ ಡಿಂಪಲ್ ಶೆಟ್ಟಿ, (ಮೇರ್ಲ ಉದಯ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿ ಪುತ್ರಿ) 4 X 100 ಮೀಟರ್ ರಿಲೇ ಪ್ರಥಮ, 

ಶ್ರೀ ವರ್ಣ ಪಿ ಡಿ (ಪಾಲೆತ್ತಡಿ ಧರ್ಣಪ್ಪ ಗೌಡ ಮತ್ತು ಮಮತಾ ಪಿ ದಂಪತಿ ಪುತ್ರಿ)4 X100 ರಿಲೇ ಸ್ಪರ್ಧೆಯಲ್ಲಿ ಪ್ರಥಮ, ಎತ್ತರ ಜಿಗಿತ ದ್ವಿತೀಯ, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ 10ನೇ ತರಗತಿ (ಬಪ್ಪಳಿಗೆ ಕಮಲಾಕ್ಷ ಮತ್ತು ಜಯಲತಾ ದಂಪತಿ ಪುತ್ರಿ) 100 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ, 4 X100 ಮೀಟರ್ ರಿಲೇ ದ್ವಿತೀಯ, 4X400ಮೀ ರಿಲೇ ತೃತೀಯ,

ಬಿ ಲಿಖಿತ ರೈ 10ನೇ ತರಗತಿ ( ಚನಿಲ ಬಿ ಜಗನ್ನಾಥ ರೈ ಮತ್ತು ಗೀತಾ ಜೆ ರೈ ದಂಪತಿ ಪುತ್ರಿ) 4 X100ಮೀ ರಿಲೆಯಲ್ಲಿ ದ್ವಿತೀಯ, 4 X400ಮೀ ರಿಲೇ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ

ಕೃಪಾಲ್.ಪಿ.ಕೆ, ಅನ್ನಿಕಾ ಎಂ, ಚರಣ್ ಕುಮಾರ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ – ಶಿಕ್ಷಕ ವೆಂಕಟೇಶ್ ಪ್ರಸಾದ್ ರಾಜ್ಯಮಟ್ಟಕ್ಕೆ ಆಯ್ಕೆ

ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ – ಶಿಕ್ಷಕ ವೆಂಕಟೇಶ್ ಪ್ರಸಾದ್ ರಾಜ್ಯಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಹಿರಿಯರ ಕ್ರೀಡಾ ಸಂಘದ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 17ನೇ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಪುತ್ತೂರು, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ,

ಪುತ್ತೂರು ತಾಲೂಕು, ದರ್ಬೆತ್ತಡ್ಕದ  ವೆಂಕಟೇಶ್ ಪ್ರಸಾದ್ ಇವರು 45ರ ವಯೋಮಾನ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ, ಉದ್ದಜಿಗಿತದಲ್ಲಿ ದ್ವಿತೀಯ ಹಾಗೂ  ಜಾವೆಲಿನ್ ಎಸೆತದಲ್ಲಿ ತೃತೀಯ ಸ್ಥಾನ ಪಡೆದು ಕೋಲಾರದಲ್ಲಿನಡೆಯುವ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. 

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 100ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ದ ಕ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ ಮಂಗಳೂರು ಮತ್ತು ಸರಕಾರಿ ಪ್ರೌಢಶಾಲೆ ಅತ್ತಾವರ ಇದರ ಆಶ್ರಯದಲ್ಲಿ

ನವೆಂಬರ್ 15, 16ರಂದು ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 7ನೇತರಗತಿ ವಿದ್ಯಾರ್ಥಿನಿ ದಿವಿಜ್ಞಾ ಯು ಎಸ್ (ಕಲ್ಲರ್ಪೆಯ ಶಿವಪ್ರಸಾದ್ ಮತ್ತು ಪವಿತ್ರ ದಂಪತಿಯ ಪುತ್ರಿ)

14ರ ವಯೋಮಾನದ ಪ್ರಾಥಮಿಕ ವಿಭಾಗದ ಬಾಲಕಿಯರ 100ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ತಾಳಮದ್ದಳೆ ಮತ್ತು ಕೃಷಿ ಕ್ಷೇತ್ರದ ಅನನ್ಯ ಸಾಧಕ ಕಾಂತ ರೈ 

ತಾಳಮದ್ದಳೆ ಮತ್ತು ಕೃಷಿ ಕ್ಷೇತ್ರದ ಅನನ್ಯ ಸಾಧಕ ಕಾಂತ ರೈ – ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ಶ್ರೀಪತಿ ಭಟ್ ಮೂಡಬಿದ್ರೆ

ಮಂಗಳೂರು: ‘ಯಕ್ಷಗಾನದ ಹಳೆಯ ತಲೆಮಾರಿನ ವಿದ್ವತ್ ಪರಂಪರೆಯಲ್ಲಿ ಪ್ರಮುಖರಾದವರು ವಿದ್ವಾನ್ ಕಾಂತ ರೈ. ತಾಳಮದ್ದಳೆ ಮತ್ತು ಕೃಷಿ ಕ್ಷೇತ್ರದಲ್ಲಿ ಅವರದು ಅನನ್ಯ ಸಾಧನೆ. ಮೂಡಬಿದಿರೆ ಜೈನ್ ಜ್ಯೂನಿಯರ್ ಕಾಲೇಜು ಕನ್ನಡ ಪ್ರಾಧ್ಯಾಪಕರಾಗಿದ್ದ ಅವರು ಸಮಾಜದಲ್ಲಿಂದು ಪ್ರತಿಷ್ಠಿತ ಸ್ಥಾನದಲ್ಲಿರುವ ಹಲವು ಗಣ್ಯರನ್ನು ಶಿಷ್ಯರನ್ನಾಗಿ ಪಡೆದಿದ್ದರು’ ಎಂದು ಮೂಡಬಿದಿರೆ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರಿ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಹೇಳಿದ್ದಾರೆ.

     ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಯಕ್ಷಗಾನ ಚಿಂತನ ಮಂಥನ  ಮತ್ತು ಪ್ರದರ್ಶನ ವೇದಿಕೆಯಾದ ‘ಯಕ್ಷಾಂಗಣ ಮಂಗಳೂರು’, ಮಂಗಳೂರು ವಿಶ್ವವಿದ್ಯಾ ನಿಲಯದ ಡಾl ದಯಾನಂದ ಪೈ, ಸತೀಶ್ ಪೈ  ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಸಪ್ತ ವಿಜಯ’ ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022 ಹತ್ತನೇ ವರ್ಷದ ನುಡಿ ಹಬ್ಬ ಸಂದರ್ಭ ವಿದ್ವಾನ್ ಕಾಂತ ರೈ ಸಂಸ್ಮರಣ  ಕಾರ್ಯಕ್ರಮದಲ್ಲಿ ದೀಪ ಬೆಳಗಿ ಅವರು ಮಾತನಾಡಿದರು.

ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಕಲ್ಲಿಮಾರು ನುಡಿನಮನ ಸಲ್ಲಿಸಿದರು.

ಪ್ರೊ.ಜಿ.ಆರ್ ರೈಗೆ ಸಮ್ಮಾನ:

      ಸಮಾರಂಭದಲ್ಲಿ 96 ವರ್ಷದ ಹಿರಿಯ ವಿದ್ವಾಂಸ, ಮಣಿಪಾಲ ಮತ್ತು ನಿಟ್ಟೆ ಇಂಜಿನಿಯರಿಂಗ್ ಕಾಲೇಜು ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಆರ್.ರೈ ಅವರನ್ನು ಸನ್ಮಾನಿಸಲಾಯಿತು. ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಭಾರತಿ ಬಿಲ್ಡರ್ಸ್ ನ ಲೋಕನಾಥ ಶೆಟ್ಟಿ, ದಿ. ಕಾಂತ ರೈಯವರ ಮೊಮ್ಮಗ ಪ್ರಗತಿಪರ ಕೃಷಿಕ  ವಿಶಾಲಕೀರ್ತಿ ರೈ ಹೊಸಂಗಡಿ ಮುಖ್ಯ ಅತಿಥಿಗಳಾಗಿದ್ದರು.

       ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ  ಪುಷ್ಕಳ ಕುಮಾರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.

ಸುಧಾಕರ್ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಸುಮ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಆಜ್ರಿ ಉಪಸ್ಥಿತರಿದ್ದರು.

 ‘ಭೀಮಸೇನ ವಿಜಯ’ ತಾಳಮದ್ದಳೆ:

      ಬಳಿಕ ‘ಸಪ್ತ ವಿಜಯ’ ಸರಣಿ ಅಂಗವಾಗಿ ಜರಗಿದ ನಾಲ್ಕನೇ ಪ್ರಸಂಗ ‘ಭೀಮಸೇನ ವಿಜಯ’ ತಾಳಮದ್ದಳೆಯಲ್ಲಿ ಪುರುಷೋತ್ತಮ ಭಟ್ ನಿಡುವಜೆ ಮತ್ತು ಭರತರಾಜ್ ಶೆಟ್ಟಿ ಸಿದ್ದಕಟ್ಟೆ ಅವರ ಭಾಗವತಿಕೆಯಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರು ಪಾಲ್ಗೊಂಡರು.

ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಅತಿಥಿಗಳ ಮುಂದೆ ವಧುವನ್ನು ಚುಂಬಿಸಿದ ವರ – ಪೊಲೀಸರಿಗೆ ದೂರು ನೀಡಿದ ಸಿಟ್ಟಿಗೆದ್ದ ವಧು, ಮುರಿದುಬಿದ್ದ ಮದುವೆ

ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಅತಿಥಿಗಳ ಮುಂದೆ ವರನು ವಧುವನ್ನು ಚುಂಬಿಸಿದ್ದಾನೆ. ಯುಪಿಯ ಸಂಭಾಲ್‌ನಲ್ಲಿ ಅತಿಥಿಗಳ ಮುಂದೆ ವರ ತನಗೆ ಚುಂಬಿಸಿದ ನಂತರ ವಧು ದೂರು ದಾಖಲಿಸಿದ್ದಾಳೆ.

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ವಿವಾಹದ ಆರತಕ್ಷತೆ ಸಮಾರಂಭದಲ್ಲಿ ವರನೊಬ್ಬ ಸುಮಾರು 300 ಅತಿಥಿಗಳ ಸಮ್ಮುಖದಲ್ಲಿ ತನ್ನ ವಧುವಿಗೆ ಮುತ್ತಿಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆಕೆ ಆತನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿ ಆತನಂತಹ ಪುರುಷನೊಂದಿಗೆ ಬಾಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ಪಾರ್ಟಿಯಲ್ಲಿ ವರನೊಬ್ಬ ಎಲ್ಲರ ಸಮ್ಮುಖದಲ್ಲಿಯೇ ತನಗೆ ಮುತ್ತು ಕೊಟ್ಟ ನಂತರ ವಧು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ದಂಪತಿಗಳು ನವೆಂಬರ್ 26 ರಂದು ಯುಪಿ ಸಾಮೂಹಿಕ ವಿವಾಹ ಯೋಜನೆ 2022 ರಲ್ಲಿ ವಿವಾಹವಾದರು. ನವೆಂಬರ್ 28 ರಂದು ಪಾವಾಸಾ ಗ್ರಾಮದಲ್ಲಿ ನಡೆದ ವಿವಾಹದ ಆರತಕ್ಷತೆ ಸಮಾರಂಭದಲ್ಲಿ, ವಧು ಮತ್ತು ವರರು ವೇದಿಕೆಯಲ್ಲಿ ಕುಳಿತಿದ್ದರು.

ಇದ್ದಕ್ಕಿದ್ದಂತೆ, ಸುಮಾರು 300 ಅತಿಥಿಗಳ ಮುಂದೆ ವರನು ವಧುವಿಗೆ ಮುತ್ತು ಕೊಟ್ಟನು. ಇದರಿಂದ ಕುಪಿತಳಾದ ವಧು ವೇದಿಕೆ ಬಿಟ್ಟು ತನ್ನ ಕೋಣೆಗೆ ತೆರಳಿದ್ದಾಳೆ. ಕುಟುಂಬಸ್ಥರು ಆಕೆಯನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಆಕೆ ಪೊಲೀಸ್ ಠಾಣೆಗೆ ಹೋಗಲು ಹಠ ಹಿಡಿದಿದ್ದಳು. ವೇದಿಕೆ ಏರಲು ನಿರಾಕರಿಸಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.

ತನ್ನ ದೂರಿನಲ್ಲಿ, “ಇನ್ನು ಮುಂದೆ ನಾನು ಅವನ (ವರ) ಜೊತೆ ಇರಲು ಬಯಸುವುದಿಲ್ಲ, ನಾನು ನನ್ನ ಮನೆಯಲ್ಲಿಯೇ ಇರುತ್ತೇನೆ, ಅವನ ನಡವಳಿಕೆ ನನಗೆ ಇಷ್ಟವಿಲ್ಲ, 300 ಜನರ ಮುಂದೆ ಇಂತಹ ಕೃತ್ಯ ಎಸಗುವ ವ್ಯಕ್ತಿ. , ಅವರು ಹೇಗೆ ಸುಧಾರಿಸಬಹುದು? ಅದಕ್ಕಾಗಿಯೇ ಈ ಕೃತ್ಯಕ್ಕಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಆದರೆ, ವರ ಆರೋಪಗಳನ್ನು ತಳ್ಳಿಹಾಕಿದ್ದು, ಈ ಕಿಸ್ ತನ್ನ ಮತ್ತು ವಧುವಿನ ನಡುವಿನ ಬಾಜಿಯ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ. ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ವರನಿಗೆ ಮುತ್ತು ಕೊಟ್ಟರೆ 1500 ರೂಪಾಯಿ ನೀಡುವುದಾಗಿ ವಧುವಿನ ಜೊತೆ ಬೆಟ್ ಕಟ್ಟಿದ್ದಾಗಿ ಹೇಳಿಕೊಂಡಿದ್ದಾನೆ. ಇದು ಸಾಧ್ಯವಾಗದಿದ್ದರೆ ತಾನು ವಧುವಿಗೆ ಮುತ್ತು ಕೊಟ್ಟರೆ ತನಗೆ 3000 ರೂ. ಕೊಡಬೇಕು ಎಂಬ ಬೆಟ್ ಕಟ್ಟಿರುವುದಾಗಿ ಹೇಳಿದ್ದಾನೆ.

ಇದೇ ವಿಚಾರವಾಗಿ ವಧುವನ್ನು ಠಾಣೆ ಪೊಲೀಸ್ ಅಧಿಕಾರಿ ಕೇಳಿದಾಗ, ತಮ್ಮ ನಡುವೆ ಯಾವುದೇ ಬಾಜಿ ಇರಲಿಲ್ಲ ಎಂದು ವಧು ಹೇಳಿದ್ದಾಳೆ. ಸುದೀರ್ಘ ಚರ್ಚೆ ಮತ್ತು ವಾದದ ನಂತರ, ಎರಡೂ ಕಡೆಯವರು ವಧು-ವರರು ಒಟ್ಟಿಗೆ ವಾಸಿಸುವುದಿಲ್ಲ ಎಂದು ಒಪ್ಪಂದಕ್ಕೆ ಬಂದರು.

ಅವರ ಮದುವೆ ಇನ್ನೂ ನೋಂದಣಿಯಾಗಿಲ್ಲದ ಕಾರಣ, ಅವರು ಬಯಸಿದರೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹನುಮಗಿರಿ ಮೇಳದವರಿಂದ ನಿರಂತರ ಐದು ದಿನಗಳ ಯಕ್ಷಗಾನ ಕಾರ್ಯಕ್ರಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ 

ಹನುಮಗಿರಿ ಮೇಳದವರಿಂದ ನಿರಂತರ ಐದು ದಿನಗಳ ಯಕ್ಷಗಾನ ಕಾರ್ಯಕ್ರಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ 

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ (ಹನುಮಗಿರಿ ಮೇಳ) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ನಿರಂತರ ಐದು ದಿನಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮ ಈ ತಿಂಗಳ ಐದರಿಂದ ಅಂದರೆ ದಿನಾಂಕ 05.12.2022 ಸೋಮವಾರದಿಂದ ಆರಂಭಗೊಂಡು ದಿನಾಂಕ 09.12.2022ರ ಶುಕ್ರವಾರದ ವರೆಗೆ ನಡೆಯಲಿದೆ. ಯಕ್ಷಗಾನ ಪ್ರದರ್ಶನ 6 ಘಂಟೆಗೆ ಆರಂಭವಾಗಲಿದೆ.

ಈ ಐದು ದಿನಗಳಲ್ಲಿ ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ ಎಂಬ ಪ್ರಸಂಗಗಳನ್ನು ಆಡಿ ತೋರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 

ಹೆಚ್ಚಿನ ವಿವರಗಳಿಗೆ ಕರಪತ್ರವನ್ನು ನೋಡಿ. 

ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿ, ಲೈಂಗಿಕ ಶೋಷಣೆಯ ನಂತರ ಮದುವೆಯಾಗಲು ಒತ್ತಾಯಿಸಿದ ಯುವತಿ, ಮದುವೆಗಾಗಿ ಮತಾಂತರವಾಗುವಂತೆ ಒತ್ತಾಯಿಸಿ ಹಿಂಸೆ ನೀಡಿದ ಇಬ್ಬರು ಯುವಕರ ಬಂಧನ 

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಯುವತಿಯನ್ನು ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.  

ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿ, ಲೈಂಗಿಕ ಶೋಷಣೆಯ ನಂತರ ಮದುವೆಗಾಗಿ ಮತಾಂತರವಾಗುವಂತೆ ಒತ್ತಾಯಿಸಿ ಹಿಂಸೆ ನೀಡಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಕೊಳತ್ತಾರದ ಚೆರುವಣ್ಣೂರಿನ ಕೊಟ್ಟಲದ ನಿವಾಸಿ ಎ.ಕೆ.ನಿಹಾದ್ ಶಾನ್ (24) ಹಾಗೂ ಆತನ ಸ್ನೇಹಿತ ಮಲಪ್ಪುರಂನ ವಜಹೂರಿನ ಮಂಗೊಟ್ಟು ನಿವಾಸಿ ಮೊಹಮ್ಮದ್ ಜುನೈದ್ (26) ಬಂಧಿತರು.

ದೌರ್ಜನ್ಯಕ್ಕೊಳಗಾದ ಮಹಿಳೆ ಕನ್ಯಾಕುಮಾರಿ ಮೂಲದವಳು. ದೂರಿನ ಪ್ರಕಾರ, ಮಹಿಳೆಯನ್ನು ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳ ವಿವಿಧ ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲಾಯಿತು. ಮಹಿಳೆ ಅಕ್ಟೋಬರ್ 29 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ.

ಯುವತಿ ಮತ್ತು ನಿಹಾದ್ ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿ ಪ್ರೀತಿಸುತ್ತಿದ್ದರು. ತನ್ನನ್ನು ಮದುವೆಯಾಗುವಂತೆ ಯುವತಿ ಕೇಳಿದಾಗ ಆರೋಪಿ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದಾಗ ಆ ವ್ಯಕ್ತಿ ಆಕೆಯನ್ನು ಸಂಬಂಧದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾನೆ.

ಸಂಬಂಧದಿಂದ ಹಿಂದೆ ಸರಿಯಲು ಮಹಿಳೆ ನಿರಾಕರಿಸಿದ್ದರಿಂದ ನಿಹಾದ್ ತನ್ನ ಸ್ನೇಹಿತರ ಮೂಲಕ ಮಹಿಳೆಗೆ ಅಪಘಾತದಲ್ಲಿ ತಾನು ಸ್ಮರಣಶಕ್ತಿ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ.

ಪೆರಿಂತಲ್ಮನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಕೆಗೆ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಪೆರಿಂತಲ್ಮನ್ನಾಕ್ಕೆ ಬಂದ ಮಹಿಳೆಯನ್ನು ಬೇರೆ ಬೇರೆ ಕಡೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ.

ರೆಸ್ಟೋರೆಂಟ್ ಗೆ ರಾತ್ರಿ 11.30 ಘಂಟೆಗೆ ನುಗ್ಗಿ ದಾಂಧಲೆ – ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೆ ಜಗಳವಾಡಿದ 5 ಮಂದಿ ದುಷ್ಕರ್ಮಿಗಳ ಬಂಧನ | ವೀಡಿಯೊ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ರಾತ್ರಿ 11.30 ಘಂಟೆಗೆ ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳು ಹೋಟೆಲ್ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ.

ಅವರಿಗೆ ಆಹಾರವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು, ಆದರೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದರು, ತಡವಾಗಿದೆ ಎಂದು ಹೇಳಿದ್ದಾರೆ, ಇದು ಜಗಳಕ್ಕೆ ಕಾರಣವಾಯಿತು. ಐವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ರೆಸ್ಟೋರೆಂಟ್‌ಗೆ ನುಗ್ಗಿ ಹೋಟೆಲ್ ಸಿಬ್ಬಂದಿಯೊಂದಿಗೆ ಜಗಳವಾಡಿದ ಐವರು ಪಾನಮತ್ತ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 30 ರ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇಡೀ ಜಗಳವನ್ನು ಅಲ್ಲಿದ್ದ ವೀಕ್ಷಕರೊಬ್ಬರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವಿಲೇಜ್ ರೆಸ್ಟೋರೆಂಟ್ ಹೆಸರಿನ ಹೋಟೆಲ್‌ನಲ್ಲಿ ಬುಧವಾರ ರಾತ್ರಿ 11.30 ರ ಸುಮಾರಿಗೆ ಗಲಾಟೆ ನಡೆದಿದೆ. ರಾತ್ರಿ 11.20ಕ್ಕೆ ಹೋಟೆಲ್‌ಗೆ ನುಗ್ಗಿದ ಗ್ಯಾಂಗ್, ತಮಗೆ ಊಟ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಆಹಾರ ನೀಡಲು ನಿರಾಕರಿಸಿದರು ಮತ್ತು ಕೊನೆಯ ಆರ್ಡರ್ ಸಮಯ ರಾತ್ರಿ 11 ಗಂಟೆ ಎಂದು ಹೇಳಿದರು.

ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾರೆ. ಈ ಜಗಳವು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಮತ್ತು ಹೋಟೆಲ್ ಸಿಬ್ಬಂದಿಗಳ ನಡುವೆ ಪೂರ್ಣ ಪ್ರಮಾಣದ ಜಗಳಕ್ಕೆ ಕಾರಣವಾಯಿತು.

ಗಲಾಟೆ ಉಲ್ಬಣಗೊಂಡಿತು ಮತ್ತು ಹತ್ತಿರದ ಇತರ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಘಟನೆಯನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಕುಡಿದ ಮತ್ತಿನಲ್ಲಿದ್ದ ಐವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

“ಕುಡಿತದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಮತ್ತು ವಿಲೇಜ್ ರೆಸ್ಟೋರೆಂಟ್‌ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ತನಿಖೆಯ ಆಧಾರದ ಮೇಲೆ ನಾವು ದುಷ್ಕರ್ಮಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಅವರಲ್ಲಿ ಐವರನ್ನು ಬಂಧಿಸಿದ್ದೇವೆ. ತನಿಖೆ ಇನ್ನೂ ಮುಂದುವರೆದಿದೆ. ” ಎಂದು ಆಗ್ನೇಯ ಬೆಂಗಳೂರಿನ ಉಪ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೆ ಬೇಕಾಗುವ ಮೂಲಭೂತ ಅಂಶಗಳು – ವಿಚಾರ ಸಂಕಿರಣ

0

ಪುತ್ತೂರು: ನಮ್ಮ ಮನೆಯ ಮಸಾಲೆಯ ಡಬ್ಬವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅನೇಕ ರೋಗಗಳಿಗೆ ಕಡಿವಾಣ ಹಾಕಬಹುದು ಅಂತೆಯೇ ನಮ್ಮ ತಾಂತ್ರಿಕ ಸಂಸ್ಥೆಯಲ್ಲಿರುವ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸಂಸ್ಥೆಯ ಬಳಕೆಗೆ ಬೇಕಾದ ತಂತ್ರಜ್ಞಾನವನ್ನು ನಾವೇ ಅಭಿವೃದ್ಧಿ ಪಡಿಸಬಹುದು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಂಯುಕ್ತ ಆಶ್ರಯದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಎಂ.ಸಿ.ಎ ವಿಭಾಗದ ಸಭಾಂಗಣದಲ್ಲಿ ನಡೆದ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೆ ಬೇಕಾಗುವ ಮೂಲಭೂತ ಅಂಶಗಳು ಎನ್ನುವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತಾಡಿದರು.

ಪ್ರಸ್ತುತ ಪಠ್ಯಕ್ರಮಕ್ಕೆ ಪೂರಕವಾಗುವ ರೀತಿಯಲ್ಲಿ ಈ ತರಬೇತಿಗಳು ನಡೆಯುತ್ತಿದ್ದು, ಪದವಿ ಮುಗಿಯುವಾಗ ನಿಮಗೆ ಇದೊಂದು ಪೂರಕ ಅಂಶವಾಗಿ ಪರಿಗಣನೆಯಾಗುತ್ತದೆ ಅಲ್ಲದೆ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಜತೆಗೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಸಂಶೋಧನೆ ಪ್ರತಿಯೊಬ್ಬ ಮಾನವನ ಜೀವನ ಭಾಗವಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ದಿಯಾಗುತ್ತಲೇ ಇವೆ. ಅದನ್ನು ಅಳವಡಿಸಿಕೊಂಡು ಹೋಗುವ ಅನಿವಾರ್ಯತೆ ನಮಗಿದೆ ಎಂದರು.

ಮೊಬೈಲ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ ಅದರ ಬಳಕೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅವರದ್ದೇ ಆದ ಕಲ್ಪನೆಗಳಿವೆ ಅದರ ಸಾಕಾರಕ್ಕೆ ಅವರಿಗೆ ಪೂರಕ ಮಾಹಿತಿಯನ್ನು ನೀಡುವ ಕಾರ್ಯಗಳು ಇಲ್ಲಿ ನಡೆಯುತ್ತಿವೆ ಎಂದರು.


ಎಲ್‌ಟಿಐ ಮೈಂಡ್‌ಟ್ರೀ ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ, ದ ವೆಬ್ ಪೀಪಲ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ಶರತ್ ಶ್ರೀನಿವಾಸ್ ಹಾಗೂ ಇನ್ಫೋಸಿಸ್ ಸಂಸ್ಥೆಯ ಗ್ರೂಪ್ ಪ್ರಾಜೆಕ್ಟ್ ಮ್ಯಾನೇಜರ್ ಸುಹಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಾಗಾರವನ್ನು ನಡೆಸಿಕೊಟ್ಟರು.


ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ವಿವೇಕಾನಂದ ಪದವಿ ಕಾಲೇಜು ಮತ್ತು ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು.


ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು,
ಮೇಖಲಾ ರಾವ್ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು.

ಕುಂಬ್ಳೆ ಸುಂದರ ರಾವ್ ನಿಧನಕ್ಕೆಯಕ್ಷಗಾನ ಕಲಾರಂಗದ ವತಿಯಿಂದ ಸಂತಾಪ

0

ಉಡುಪಿ :ಯಕ್ಷಗಾನ ಆಟ-ಕೂಟಗಳಲ್ಲಿ ಕಳೆದ 6 ದಶಕಗಳಿಂದ ಮೇರುಕಲಾವಿದರಾಗಿ ಮೆರೆದ, ಶಾಸಕರಾಗಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಲೆ ಮತ್ತು ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ ಕುಂಬ್ಳೆ ಸುಂದರ ರಾವ್‌ ಅವರು

ದಿನಾಂಕ 30-11-2022ರಂದು ನಿಧನ ಹೊಂದಿದ್ದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್‌ ಇವರ ಸದ್ಗತಿಗಾಗಿ ಪ್ರಾರ್ಥಿಸಿ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಈ ನಿಮಿತ್ತ ನಾಳೆ (01-12-2022, ಗುರುವಾರ) ಸಂಜೆ 5.30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ಅವರ ಅಭಿಮಾನಿಗಳು ಪಾಲ್ಗೊಳ್ಳಬೇಕಾಗಿ ಯಕ್ಷಗಾನ ಕಲಾರಂಗ ವಿನಂತಿಸಿಕೊಂಡಿದೆ.